Wednesday, 25 March 2015

ಹೀಗೆ ಮೊದಲಾಯ್ತು........


ಆ ಕಂಗಳಲ್ಲಿ ಭಯವಿಲ್ಲಾ
ಅಲ್ಲಿ ಛಲವಿದೆ
ಮಾಡೆ ಮಾಡುತ್ತೀನಿ ,ಕಲಿತೆ ಕಲಿಯುತ್ತೀನಿ ಎನ್ನುವ ಛಲ.
ಅದೆಷ್ಟೇ ಸಾರಿ ಬಿದ್ದರು ನೋವಾದರೂ
ಆ ಕಂದಮ್ಮ ನಡೆಯುವ ಹಂಬಲವನ್ನು ಮಾತ್ರ ತೊರೆಯುವುದಿಲ್ಲಾ
ಆದರೆ ಅದೇ ಮಗು ಬೆಳೆಯುತ್ತಾ ಹೋದಂತೆ ಕಲಿಯುವ ಹಂಬಲ ಕ್ಷೀಣಿಸುವುದೆತಕ್ಕೆ ?
ಅಥವಾ ಆ ಹಂಬಲದ ಭ್ರೂಣಕ್ಕೆ  ಈ ಲೋಕದ ಮಾಯೆಯೊಳಗೆ ಉಸಿರಾಡಲು ಸ್ಥಳಾವಕಾಶ ಸಿಗುತ್ತಿಲ್ಲವೆ ?
ಉತ್ತರ ನಮ್ಮೊಳಗೇ ಇದೆ. ನಾನು ನನ್ನೊಳಗೆ...... ಒಂದು ಅವಲೋಕನಗಳ ಸರಮಾಲೆ.......